Kannada news-Latest news in Kannada-Kannada live news-Kannada Breaking News-Online Kananda News

ಮೊಸಳೆ ದಾಳಿಯಿಂದ ಯುವಕ ಆಶ್ಚರ್ಯಕರವಾಗಿ ಬಚಾವ್

Youth Escapes From Crocodile Attack | itskannada

0 9

ಕಾರವಾರ: ( itskannada) ಮೊಸಳೆ ದಾಳಿಯಿಂದ ಯುವಕ ಆಶ್ಚರ್ಯಕರವಾಗಿ ಬಚಾವ್ : ಮೊಸಳೆ ಧಾಳಿಯಿಂದ ಯುವಕನೊಬ್ಬ ಆಶ್ಚರ್ಯಕರವಾಗಿ ತಪ್ಪಿಸಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸಮೀಪ ಕಾಳಿ ನದಿಯ ಬಳಿ ನಡೆದಿದೆ. ಮೊಸಳೆಯು ಹಟಾತ್ತನೆ ಮೇಲೆರಗಿ ಗಾಯಗೊಳಿಸಿತಾದರು ಅದೃಷ್ಟವಶಾತ್ ಯುವಕ ಪಾರಾಗಿದ್ದಾನೆ. “ತಕ್ಕು ಗಂಗು ಬಜರಿ  ” ಎಂಬಾತನೇ ಮೊಸಳೆ ದಾಳಿಗೊಳಗಾದ ಯುವಕ.

ತಮ್ಮ ಮನೆಯ ಸಮೀಪವೇ ಇರುವ ಕಾಳಿ  ನದಿಯಲ್ಲಿ ಕೈ ತೊಳೆಯಲೆಂದು ಹೋದಾಗ ಈ ಘಟನೆ ನಡೆದಿದೆ. ಕೈ ತೊಳೆಯುವಾಗ ಮೊಸಳೆಯು ಏಕಾಏಕಿ ದಾಳಿ ಮಾಡಿದೆ.

ಮೊಸಳೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಯುವಕ ಹೆಣಗಾಡಬೇಕಾಯಿತು. ಮೊಸಳೆಯಿಂದ ತಪ್ಪಿಸಿಕೊಳ್ಳಲು ಸಪಲನಾದನಾದರು , ಮೊಸಳೆಯ ದಾಳಿಯಿಂದ ಯುವಕನ ಕಾಲಿಗೆ ಬಲವಾದ ಪೆಟ್ಟಾಗಿದೆ.

ಗಾಯಗೊಂಡ ಯುವಕ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಂತರ ಅವರನ್ನು ಮತ್ತಷ್ಟು ಚಿಕಿತ್ಸೆಗಾಗಿ ಹುಬ್ಬಳಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. | itskannada


ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಕಾರವಾರಸುದ್ದಿ ಗಳಿಗಾಗಿ ಕಾರವಾರ ಸುದ್ದಿ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕಾರವಾರ ನ್ಯೂಸ್ ಪುಟ – ಕಾರವಾರ ನ್ಯೂಸ್ ತಲುಪಿ.  itskannada :Today News In Kannada –Kannada news– more in Karwar News click Karwar News Online or look at Karwar News Today