ದಿಡೀರ್ ಟೊಮೊಟೊ ಚಿತ್ರಾನ್ನ

tomato chitranna rice | itskannada Recipes

0 129

(itskannada): ದಿಡೀರ್ ಟೊಮೊಟೊ ಚಿತ್ರಾನ್ನ – ಮಾಡುವುದು ಸುಲಭ , ತಿನ್ನಲು ರುಚಿಕರ. ಮನೆಗೆ ಗೆಳೆಯರು ಅಥವಾ ನೆಂಟರು ಬಂದಾಗ , ಸ್ವಲ್ಪ ಸಮಯದಲ್ಲಿಯೇ  ಈ ದಿಡೀರ್ ಟೊಮೋಟೊ ಚಿತ್ರಾನ್ನ ಮಾಡಬಹುದು. ಇದಕ್ಕೇನು ಅಷ್ಟು ಶ್ರಮ ಬೇಕಾಗಿಲ್ಲವಾದ್ದರಿಂದ ಬೇಗನೆ ಮಾಡುವ ಸುಲಭ ಅಡುಗೆ  ಟೊಮೊಟೊ ಚಿತ್ರಾನ್ನ .

ಈ ಹಿಂದಿನ ಲೇಖನದಲ್ಲಿ 5 ನಿಮಿಷದಲ್ಲಿ ಘೀರೈಸ್ ಮಾಡುವುದು ಹೇಗೆ ?  ಎಂದು ತಿಳಿದುಕೊಂಡಿದ್ದಾಯಿತು , ಹಾಗಾದರೆ ಈಗ  ದಿಡೀರ್ ಟೊಮಟೊ ಚಿತ್ರಾನ್ನ ಮಾಡುವುದು ಹೇಗೆ ಎಂಬ ವಿಧಾನ ಕಲಿಯೋಣ. ಹಾಗೂ ಬೇಗನೆ ಮಾಡಬಹುದಾದ ಅಡುಗೆಗಳಲ್ಲಿ ಇದೂ ಕೂಡ ಒಂದು.

ದಿಡೀರ್ ಟೊಮೊಟೊ ಚಿತ್ರಾನ್ನ ಮಾಡಲು ಬೇಕಾದ ಪದಾರ್ಥಗಳು .

  • ಅಕ್ಕಿ
  • ಕಡಲೆಬೇಳೆ
  • ಟೊಮೊಟೊtomato chitranna rice-itskannada
  • ಉದ್ದಿನಬೇಳೆ
  • ಈರುಳ್ಳಿ
  • ಕೊತ್ತಂಬರಿ ಸೊಪ್ಪು
  • ಹಸಿ ಮೆಣಸಿನ ಕಾಯಿ
  • ಕರಿಬೇವಿನ ಸೊಪ್ಪು
  • ಎಣ್ಣೆ
  • ಜೀರಿಗೆ
  • ಸಾಸಿವೆ

ದಿಡೀರ್ ಟೊಮೊಟೊ ಚಿತ್ರಾನ್ನ ಮಾಡುವ ವಿಧಾನ .

ಒಳ್ಳೆಯ ಅಕ್ಕಿಯನ್ನು ಆಯ್ದುಕೊಳ್ಳಿ , ಅಕ್ಕಿಯನ್ನು ನೀರಿನಲ್ಲಿ ನೆನೆಆಕಿ , ಸ್ವಲ್ಪ ಸಮಯದ ನಂತರ ನೀರಿನಿಂದ ಅಕ್ಕಿಯನ್ನು ಬೇರ್ಪಡಿಸಿ. ಉದುರುದುರಾಗಿ ಆಗಬೇಕಾದ್ದರಿಂದ ಅನ್ನ ಮಾಡುವ ಕುಕ್ಕರ್ ಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ. ಅಡುಗೆ ಎಣ್ಣೆ ಹಾಕುವುದರಿಂದ ಅನ್ನವು ಉದುರುದುರಾಗಿ ಆಗುತ್ತದೆ.

ಇಲ್ಲಿ ಮುಖ್ಯವಾಗಿ ಜಾಗರೂಕತೆಯಿಂದ ಮಾಡಬೇಕಾಗಿರುವುದು ಅನ್ನವಾದ್ದರಿಂದ , ಅನ್ನವು ಚನ್ನಾಗಿ ಆಗುವಂತೆ ನೋಡಿಕೊಳ್ಳಿ. ಅನ್ನವು ಮುದ್ದೆಯಾಗಿ ಆದರೆ ನೋಡಲು ಹಾಗೂ ತಿನ್ನಲು ಅಷ್ಟು ಚನ್ನಾಗಿರುವುದಿಲ್ಲ.

ಅನ್ನವನ್ನು ಉದುರುದುರಾಗಿ ಮಾಡಿಕೊಂಡ ಮೇಲೆ , ಹಸಿಮೆಣಸಿನಕಾಯಿ , ಟೊಮೊಟೊ (ಟೊಮೋಟೊ ಚಿತ್ರಾನ್ನ ಕ್ಕೆ ಮುಖ್ಯವಾಗಿ ಬೇಕಾಗಿರುವುದು ) , ಈರುಳ್ಳಿ , ಕೊತ್ತಂಬರಿ ಸೊಪ್ಪು ಎಲ್ಲವನ್ನು ಹೆಚ್ಚಿಕೊಳ್ಳಿ , ಹೆಚ್ಚಿಕೊಂಡ ಮೇಲೆ , ಒಲೆ ಹಚ್ಚಿ , ಒಲೆಯ ಮೇಲೆ ಪಾತ್ರೆಯನ್ನಿಟ್ಟು ಪಾತ್ರೆಗೆ ಅಡುಗೆ ಎಣ್ಣೆಯನ್ನು ಹಾಕಿರಿ , ಎಣ್ಣೆಯನ್ನು ಕಾಯಲು ಬಿಡಿ.

ಎಣ್ಣೆಯು ಕಾದ ಮೇಲೆ ಸಾಸಿವೆಯನ್ನು ಹಾಕಿ. ಸಾಸಿವೆಯು ಎಣ್ಣೆಯಲ್ಲಿ ಚಿಟಿದ ಮೇಲೆ ಅದಕ್ಕೆ ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ ಚನ್ನಾಗಿ ಕೆದುಕಿ ಕೊಡಿ . ಸ್ವಲ್ಪ ಕಡಿಮೆ ಉರಿಯಲ್ಲಿಯೇ ಅವು ಇರಲಿ, ಇಲ್ಲದಿದ್ದಲ್ಲಿ ಹೆಚ್ಚಿಗೆ ಬಾಡಿಹೊಗುತ್ತವೆ … ಹಾಗೆಯೇ ಕೆದುಕಿ ಕೊಡುತ್ತಿರಿ ಹಾಗೂ ಅವು ಸ್ವಲ್ಪ ಕೆಂಬಣ್ಣಕ್ಕೆ ಬಂದ ನಂತರ , ಮೊದಲೇ ತಯಾರಾಗಿಟ್ಟುಕೊಂಡ ಮೆಣಸಿನಕಾಯಿ , ಜೀರಿಗೆ , ಈರುಳ್ಳಿಯನ್ನು ಹಾಕಿ ಮತ್ತೆ ಕೆದುಕಿ ಕೊಡಲು ಪ್ರಾರಂಭಿಸಿ.

ಸ್ವಲ್ಪ ಸಮಯದ ನಂತರ ಈ ಮೊದಲೇ ಹೆಚ್ಚಿಕೊಂಡಿರುವ  ಟೊಮೊಟೊ , ಕೊತ್ತಂಬರಿ ಸೊಪ್ಪು , ಕರಿಬೇವನ್ನು ಹಾಕಿ ಮತ್ತೆ ಕೆದುಕಿ ಕೊಡಿ . ಇವೆಲ್ಲವೂ ಚೆನ್ನಾಗಿ ಬಾಡಲಿ , ಕಡಿಮೆ ಉರಿಯಲ್ಲಿಯೇ ಇವು ಬಾಡಲಿ . ಬಾಡಿಸಿದ ಮೇಲೆ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ , ಇದೀಗ ಟೊಮೋಟೊ ಚಿತ್ರಾನ್ನ ತಯಾರಾದಂತೆ. ಇದನ್ನು ಅನ್ನಕ್ಕೆ ಹಾಕಿ ಬೇಕಾಗಿರುವಸ್ತು ಮಾತ್ರ ಕಲಸಿ , ಅದರ ರುಚಿಯನ್ನು ಸವಿಯಿರಿ. ದಿಡೀರ್ ಟೊಮೊಟೊ ಚಿತ್ರಾನ್ನ ಮಾಡುವುದು ಹೇಗೆ ಗೊತ್ತಾಯಿತಲ್ವಾ -|itskannada Recipes

Webtitle : ದಿಡೀರ್ ಟೊಮೊಟೊ ಚಿತ್ರಾನ್ನ-tomato chitranna rice

keyword : ದಿಡೀರ್ ಟೊಮೊಟೊ ಚಿತ್ರಾನ್ನ , ಟೊಮೊಟೊ ಚಿತ್ರಾನ್ನ , ಟೊಮೋಟೊ ಚಿತ್ರಾನ್ನ, tomato chitranna rice .

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಅಡುಗೆಗಳಿಗಾಗಿ ಕೈ-ರುಚಿ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಅಡುಗೆ ಪುಟ –ಕನ್ನಡ ಅಡುಗೆ-ಇಲ್ಲವೇ ವಿಭಾಗ ಕರ್ನಾಟಕ ಅಡುಗೆಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada Recipes click Kannada Recipes or look at Karnataka Recipes

itskannada : News | Entertainment | Information

For Karnataka Kannada News Visit Category Karnataka News or Page Kannada News  Online Today.If you like our News portal, then please consider following us on FacebookTwitterGoogle PlusYouTube 

To Promote Your Business Advertise with Us for more details Contact Us-Click To know more About Us-Check Out FilmPoliticsCrimeHealth TipsSportsRecipesTechnologyAstrologyJokesVideo News in Kannada

80%
Awesome
  • Design

Leave A Reply

Your email address will not be published.

five × one =