Kannada news-Latest news in Kannada-Kannada live news-Kannada Breaking News-Online Kananda News

ರಾಜ್ಯದ ಜನತೆಗೆ ಮಹದಾಯಿಗೆ ಕೈಗೊಂಡಿರುವ ಬಂದ್ ನ ಬಿಸಿತಗಲಿದೆ.

karnataka bandh ksrtc & bmtc service stopped - itskannada

0 16

ಬೆಂಗಳೂರು: ( itskannada) ರಾಜ್ಯದ ಜನತೆಗೆ ಮಹದಾಯಿಗೆ ಕೈಗೊಂಡಿರುವ ಬಂದ್ ನ ಬಿಸಿತಗಲಿದೆ : ರಾಜ್ಯದ ಜನತೆಗೆ ಮಹದಾಯಿಗೆ ಕೈಗೊಂಡಿರುವ ಬಂದ್ ನ ಬಿಸಿತಗಲಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ, ವಾಹನ ಸಂಚಾರವಿಲ್ಲದೆ ಜನಸಾಮಾನ್ಯರು ಪರದಾಡುವಂತಾಗಿದೆ. ಮಹದಾಯಿಗಾಗಿ ಕನ್ನಡ ಪರ ಹೋರಾಟಗಾರರು ನಡೆಸುತ್ತಿರುವ ಬಂದ್ ಬಿರುಸಾಗಿದೆ ಸಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಕೂಡ ತನ್ನ ಸಂಚಾರವನ್ನು ರದ್ದುಗೊಳಿಸಿದೆ. ಬಿಎಂಟಿಸಿ ಯನ್ನೇ ನಂಬಿರುವ ಅನೇಕ ಪ್ರಯಾಣಿಕರು ತಮ್ಮ ಊರುಗಳಿಗೆ ಹೋಗಲಾಗದೆ ಪರದಾದುತ್ತಿರುವುದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಂಡು ಬರುತ್ತಿದೆ.ಅಲ್ಲಲ್ಲಿ ಕೆಲ ವಾಹನಗಳು ಸಂಚರಿಸುತ್ತಿವೆಯಾದರೂ ಬಂದ್ ನ ಕಾರಣ ಬಹುತೇಕ ವಾಹನಗಳು ನಿಂತಲ್ಲೇ ನಿಂತಿವೆ.

ರಾಜ್ಯದ ಹಲವೆಡೆ ಮಹದಾಯಿಗೆ ಕೈಗೊಂಡಿರುವ ಬಂದ್‍ಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಇಂದು ಬೆಳಗಿನ ಜಾವದಿಂದಲೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮೆಟ್ರೋ ತನ್ನ ಸಂಚಾರವನ್ನು ಎಂದಿನಂತೆ ನಡೆಸುತ್ತಿದೆ. ಕೆಲ ಜಿಲ್ಲೆಗಳನ್ನು ಹೊರತು ಪಡೆಸಿ ಎಲ್ಲಾ ಜಿಲ್ಲೆಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ನಗರದ ಐಟಿ-ಬಿಟಿ ಕಂಪೆನಿಗಳ ಉದ್ಯೋಗಿಗಳಿಗೆ ಮೊದಲೇ ರಜೆ ಘೋಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿನಿಮಾ ಚಿತ್ರೀಕರಣ ಮತ್ತು ಪ್ರದರ್ಶನ, ಹೋಟೆಲ್‍ಗಳು ಸಹ ಬಂದ್ ಆಗಿವೆ. ಅಲ್ಲದೆ ಕೆಎಸ್‍ಆರ್‍ಟಿಸಿ ಬಸ್‍ಗಳು ಸಹ ಡಿಪೋಗಳಿಂದ ಹೊರ ಬರುತ್ತಿಲ್ಲ. | itskannada


webtitle : karnataka bandh ksrtc & bmtc service stopped ,ರಾಜ್ಯದ ಜನತೆಗೆ ಮಹದಾಯಿಗೆ ಕೈಗೊಂಡಿರುವ ಬಂದ್ ನ ಬಿಸಿತಗಲಿದೆ

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಸುದ್ದಿಗಳಿಗಾಗಿ ಸುದ್ದಿ-ಸುತ್ತ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸುದ್ದಿ ಪುಟ –ಕನ್ನಡ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada News click Kannada News or look at Karnataka News


ನಿಮ್ಮ ನೆಚ್ಚಿನ itskannada ಸುದ್ದಿ ತಾಣವು ತನ್ನ ಸುದ್ದಿ ದೃಷ್ಟಿಯನ್ನು ಕರ್ನಾಟಕದಾದ್ಯಂತ ವಿಸ್ತರಿಸಿದೆ. ಅತೀ ಶೀಘ್ರದಲ್ಲೇ ರಾಜ್ಯದ ಮೂಲೆ ಮೂಲೆಯ ಸುದ್ದಿಗಳು itskannada ದಲ್ಲಿ ಲಭ್ಯ –Bagalkot News– Bellary News– Bengaluru Rural News – Bengaluru Urban News– Bidar News-Chamarajanagar News – Chikkaballapur News – Chikkamagaluru News – Chitradurga News– Davanagere News– Dharwad News  Gadag News – Hassan News– Haveri News– Kalaburagi News– Karwar News– Kodagu News– Koppal News– Mandya News Mangalore News– Mysore News– Raichur News– Ramanagara News  Shimoga News Tumkur News– Udupi NewsVijayapura News– Yadgir News