Kannada news-Latest news in Kannada-Kannada live news-Kannada Breaking News-Online Kananda News

ಟಾಯ್ಲೆಟ್ ನಲ್ಲಿ ಮಹಿಳೆ ಫೋಟೋ ಕ್ಲಿಕ್ಕಿಸುತ್ತಿದ್ದವನ ಬಂದನ

man arrested for taking women's photos in toilet - it's Kannada

0 20

ಬೆಂಗಳೂರು: (itskannada) ಟಾಯ್ಲೆಟ್ ನಲ್ಲಿ ಮಹಿಳೆ ಫೋಟೋ ಕ್ಲಿಕ್ಕಿಸುತ್ತಿದ್ದವನ ಬಂದನ : ಇಂದಿರಾನಗರದಲ್ಲಿನ ಐಟಿ ಸಂಸ್ಥೆಯಲ್ಲಿ ಮಹಿಳಾ ಸಿಬ್ಬಂದಿಗಳ ವಿಡಿಯೋ ಚಿತ್ರಿಸುತ್ತಿದ್ದ ಹೌಸ್ ಕೀಪಿಂಗ್ ಬಾಯ್ ಬಂದನ. ಆಸಾಮಿ ಮಹಿಳಾ ಸಿಬ್ಬಂದಿಗಳ ಟಾಯ್ಲೆಟ್ ಗಳಲ್ಲಿ ಮೊಬೈಲ್ ಅಳವಡಿಸಿ ವೀಡಿಯೊ ಚಿತ್ರಿಸುತ್ತಿದ್ದನು. 24 ವರ್ಷ ವಯಸ್ಸಿನ ಸಿಬ್ಬಂದಿ, ಮಹಿಳಾ ಉದ್ಯೋಗಿಗಳ ವೀಡಿಯೊಗಳನ್ನು ರೆಕಾರ್ಡ್ ಮಾಡಿ ಕೊಳ್ಳುತ್ತಿದ್ದನು.

ಟಾಯ್ಲೆಟ್ ನಲ್ಲಿ ಮಹಿಳೆ ಫೋಟೋ ಕ್ಲಿಕ್ಕಿಸುತ್ತಿದ್ದವನ ಬಂದನ

ಮಹಿಳೆಯರ ವೀಡಿಯೊ ಫೋಟೋ ಚಿತ್ರಿಸುದ್ದಿದ್ದವನು ಉತ್ತರ ಪ್ರದೇಶದ ದರ್ಮೇಂದ್ರ ಕುಮಾರ್ ಎಂದು ತಿಳಿದು ಬಂದಿದೆ. ಈಗ್ಗೆ ಕೆಲವು ತಿಂಗಳುಗಳಿಂದ ಇವನು ಇಲ್ಲಿಯೇ ಕೆಲಸ ಮಾಡುತ್ತಿದ್ದು , ಅಲ್ಲಿನ ಮಹಿಳಾ ಸಿಬ್ಬಂದಿಗಳ ವೀಡಿಯೊ ಚಿತ್ರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಫೋಟೋ ತೆಗೆಯುತ್ತಿದ್ದಾಗ ಗಮನಿಸಿದ ಸಿಬ್ಬಂದಿಗಳು ಅವನ ಬಳಿಯಿದ್ದ ಮೊಬೈಲ್ ಕಸಿದು ತಪಾಸಣೆ ನಡೆಸಿದಾಗ ಅದರಲ್ಲಿ ನೂರಾರು ಫೋಟೋಗಳು ಹಾಗು ವೀಡಿಯೊಗಳು ಕಂಡಿವೆ. ಹಾಗೂ ಈ ಖತರ್ನಾಕ್ ಹೌಸ್ ಕೀಪಿಂಗ್ ಬಾಯ್ ನ ನಿಜ ಸ್ವರೂಪ ಬಯಲಾಗಿದೆ.

ಪೊಲೀಸರು ಹೇಳುವಂತೆ ಇವನು ಈ ಫೋಟೋಗಳನ್ನು ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಚಿತ್ರಿಸಿದ್ದಾನೆ. ಈ ಫೋಟೋ ವೀಡಿಯೊ ಗಳನ್ನು ಚಿತ್ರಿಸಲು ಇವನು ತನ್ನ ಮೊಬೈಲ್ ಅನ್ನು ಟಾಯ್ಲೆಟ್ ಹಾಗೂ ಇನ್ನಿತರ ಕಡೆಗಳಲ್ಲಿ ಅಳವಡಿಸಿದ್ದನು.

ಪೊಲೀಸರು ಸಾಫ್ಟ್ವೇರ್ ಇಂಜಿನಿಯರ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ದೌರ್ಜನ್ಯ ದಡಿ (ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಸಿ ಅಡಿಯಲ್ಲಿ) ಶಿಕ್ಷೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿದ್ದಾರೆ. ಧರ್ಮೇಂದ್ರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು. ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ ಎಂದು ಇಂದಿರಾನಗರ ಪೊಲೀಸರು ತಿಳಿಸಿದ್ದಾರೆ. |it’s Kannada


webtitle : man arrested for taking women’s photos in toilet

Keword : ಟಾಯ್ಲೆಟ್ ನಲ್ಲಿ ಮಹಿಳೆ ಫೋಟೋ ಕ್ಲಿಕ್ಕಿಸುತ್ತಿದ್ದವನ ಬಂದನ, man arrested for taking women’s photos in toilet .

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಕ್ರೈಂ ಸುದ್ದಿ ಗಳಿಗಾಗಿ ಕ್ರೈಂ-ಕೃತ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೈಂ ಪುಟ –ಕನ್ನಡ ಕ್ರೈಂ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೈಂ ಸುದ್ದಿಗಳು ಕ್ಲಿಕ್ಕಿಸಿ itskannada :Today News in Kannada, for latest news visit-Kannada news– more in Kannada crime click Karnataka Crimes News or look at Kannada crime News