Kannada news-Latest news in Kannada-Kannada live news-Kannada Breaking News-Online Kananda News

ಮೂವರು ಕುಖ್ಯಾತ ಸರಗಳ್ಳರ ಬಂಧನ – 652 ಗ್ರಾಂ ಚಿನ್ನ ವಶ

0 25

ಬೆಂಗಳೂರು: (itskannada) ಮೂವರು ಕುಖ್ಯಾತ ಸರಗಳ್ಳರ ಬಂಧನ – 652 ಗ್ರಾಂ ಚಿನ್ನ ವಶ : ಗಿರಿನಗರ ಪೊಲೀಸರು ಮೂವರು ಕುಖ್ಯಾತ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು 18 ಲಕ್ಷ ರೂ. ಮೌಲ್ಯದ ಕದ್ದ ಆಭರಣಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಮತ್ತು ನಗರದಲ್ಲಿನ ಸರ ಕಳ್ಳತನಕ್ಕೆ ಸಂಬಂಧಿಸಿದ 19 ಪ್ರಕರಣಗಳನ್ನು ಪರಿಹರಿಸಿದ್ದಾರೆ. ಬಂಧಿತರನ್ನು ಎಚ್ಎಸ್ಆರ್ ಲೇಔಟ್ ನಿವಾಸಿ ಇಮ್ರಾನ್ ಪಾಶಾ (31), ಬೊಮ್ಮೆನಹಳ್ಳಿಯ ಅಫ್ಝಲ್ ಶರೀಫ್ (34) ಮತ್ತು ರಾಮನಗರ ಅಬ್ದುಲ್ ಶಫಾಖತ್ ಎಂದು ಗುರುತಿಸಲಾಗಿದೆ ಮತ್ತು ಅವರಿಂದ 652 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಸರಗಳ್ಳತನ ಪ್ರಕರಣಗಳ ಸಂಖ್ಯೆಯು ಹೆಚ್ಚಳದ ನಂತರ ಸರಣಿ ಕಳ್ಳತನದ ಅಪರಾಧಗಳಲ್ಲಿ ಭಾಗಿಯಾದ ಕ್ರಿಮಿನಲ್ ಗಳನ್ನು ಪತ್ತೆಹಚ್ಚಲು ನಗರದ ಪೊಲೀಸರು ತಂಡಗಳನ್ನು ರಚಿಸಿದ್ದರು. ಅವರು ಸರಗಳ್ಳತನ ನಡೆದ ಸ್ಥಳಗಳಲ್ಲಿ ಹಾಗೂ ಕಾರ್ಯತಂತ್ರದ ಸ್ಥಳಗಳಲ್ಲಿ ಜಾಗೃತಿಯನ್ನು ತೀವ್ರಗೊಳಿಸಿದ್ದರು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವುದರ ಜೊತೆಗೆ ಜೈಲಿನಿಂದ ಬಿಡುಗಡೆಗೊಂಡ ಖೈದಿಗಳನ್ನು ಟ್ರ್ಯಾಕ್ ಮಾಡಲಾರಂಬಿಸಿದ್ದರು.

ಪ್ರಕರಣದ ಮುಖ್ಯ ಆರೋಪಿ ಇಮ್ರಾನ್ ಪಾಶಾ ವೃತ್ತಿಯಲ್ಲಿ ಚಾಲಕ ಈತ 1.5 ಲಕ್ಷ ರೂ. ಸಾಲ ಮಾಡಿಕೊಂಡಿದ್ದ, TV ಮತ್ತು ಅಪರಾಧದ ಧಾರಾವಾಹಿಗಳನ್ನು , youtube ನ ವೀಡಿಯೊಗಳನ್ನು ವೀಕ್ಷಿಸುವುದನ್ನು ಪ್ರಾರಂಭಿಸಿ ಸಾಲದಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಹಾಗೂ ಐಷಾರಾಮಿ ಜೀವನ ನಡೆಸಬೇಕು ಎಂದು ನಿರ್ದರಿಸಿದನು ಮತ್ತು ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ ಸುಲಭವಾದ ಮಾರ್ಗ ಎಂದು ಸರಗಳ್ಳತನಕ್ಕೆ ಮುಂದಾದನು.ಅಫ್ಝಲ್ ಶರೀಫ್ ಮತ್ತು ಅಬ್ದುಲ್ ಶಫಾಖತ್ ರನ್ನು ಜೋತೆಗೂಡಿಸಿಕೊಂಡನು.

19 ಮಹಿಳೆಯರ ಸರ ಕಸಿದಿದ್ದ ಈ ಗ್ಯಾಂಗ್ ನ ಅದೃಷ್ಟ ಕೈಕೊಟ್ಟಿತ್ತು , ಈಗ ಗಿರಿನಗರ ಪೋಲೀಸರ ಅಥಿತಿಗಳಾಗಿದ್ದಾರೆ. – its Kannada Crime


WebTitle : 3 Chain-Snatchers arrested-652 Grams Gold recovered

Keyword : ಮೂವರು ಕುಖ್ಯಾತ ಸರಗಳ್ಳರ ಬಂಧನ – 652 ಗ್ರಾಂ ಚಿನ್ನ ವಶ -3 Chain-Snatchers arrested-652 Grams Gold recovered .

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಕ್ರೈಂ ಸುದ್ದಿ ಗಳಿಗಾಗಿ ಕ್ರೈಂ-ಕೃತ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೈಂ ಪುಟ –ಕನ್ನಡ ಕ್ರೈಂ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೈಂ ಸುದ್ದಿಗಳು ಕ್ಲಿಕ್ಕಿಸಿ itskannada :Today News in Kannada, for latest news visit-Kannada news– more in Kannada crime click Karnataka Crimes News or look at Kannada crime News

ಪಂಚಾಯತ್ ಸುದ್ದಿ – ಮಾಹಿತಿಗಳಿಗಾಗಿ ಈ ಪುಟಗಳನ್ನು ತೆರೆಯಲಾಗಿದೆ.-Avalahalli NewsBidarahalli NewsDoddabanahalli News Doddagubbi NewsHalanayakanahalli NewsKannamangala NewsKannuru NewsKittaganuru NewsKodathi NewsManduru NewsSeegehalli News