ಉದ್ದನೆಯ ಕೂದಲಿಗೆ ಸರಳ ಸಲಹೆಗಳು

0 3

Health Tips : (itskannada) ಆಹಾರ, ಪರಂಪರೆ, ಹವಾಮಾನ ಬದಲಾವಣೆ ಮತ್ತು ಮಾಲಿನ್ಯದ ವಿಭಿನ್ನ ಕಾರಣಗಳಿಂದ ನಮ್ಮ ಕೂದಲಿನ ಮೇಲೆ ಪರಿಣಾಮದಿಂದಾಗಿ ಅವು ಸರಿಯಾಗಿ ಬೆಳೆಯುವುದಿಲ್ಲ.ರಾಸಾಯನಿಕ ಬಳಕೆಯು ಇದರ ಮುಖ್ಯ ಕಾರಣ. ಸ್ವಾಭಾವಿಕ ಕೂದಲು ನಮ್ಮ ದಾಗಲು ನಾವು ಅದರ ಬಗ್ಗೆ ಗಮನಹರಿಸುವುದು ಒಳ್ಳೆಯದು, ಹಾಗೂ ಇದು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರಸಕ್ತ ಪರಿಸ್ಥಿತಿಯನ್ನು ಇಂದು ನೋಡುವುದಾದರೆ, ಕೂದಲಿನ ನಷ್ಟ ಹೆಚ್ಚಾಗಿತ್ತಿದೆ ಮತ್ತು ಸಮಸ್ಯೆ ಕೆಟ್ಟದಾಗಿ ಪರಿಣಮಿಸಿದೆ.

ಉದ್ದನೆಯ ಕೂದಲಿಗೆ ಸರಳ ಸಲಹೆಗಳು –Simple tips for long hair in Kannada

ಕೃತಕ ಶ್ಯಾಂಪೂಗಳು, ಕ್ರೀಮ್ಗಳು ಮತ್ತು ಕೂದಲನ್ನು ಒಣಗಿಸುವ ರೀತಿ,ಕೂದಲಿನ ಶೈಲಿಯು, ಕಬ್ಬಿಣಾಂಶ ಮತ್ತು ಡ್ರೈಯರ್ ಗಳ ಪರಿಣಾಮವಾಗಿ ಇಂದು ಕೂದಲು ಕ್ಷೀಣಿಸುತ್ತಿದೆ. ಉದ್ದನೆಯ ಕೂದಲಿಗೆ ಸರಳ ಸಲಹೆಗಳು ನಿಮ್ಮ ಕೂದಲು ಸುಂದರ ಮತ್ತು ಉದ್ದನೆಯದಾಗಲು ನೆರವಾಗುತ್ತದೆ.

ಸುಂದರವಾದ ಉನ್ನತ ಕೂದಲು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಹೇರ್ ಡಿಪ್ರೆಶನ್ ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಮಾರುಕಟ್ಟೆಯಲ್ಲಿ ಇಂದು ಅನೇಕ ಉತ್ಪನ್ನಗಳು ಕುದಲಿಗಾಗಿ ಇವೆಯಾದರೂ ಕೂದಲು ಟೋನ್ ಹೆಚ್ಚಿಸಲು ಕೆಲವು ನೈಸರ್ಗಿಕ ಸಲಹೆಗಳು ಉದ್ದನೆಯ ಕೂದಲಿಗೆ ಸರಳ ಸಲಹೆಗಳು ಇಲ್ಲಿವೆ ..

ತೈಲ ಮಸಾಜ್ – hair growing tips in Kannada

ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿ. ಮಸಾಜ್ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಕೂದಲನ್ನು ರಕ್ಷಿಸುತ್ತದೆ. ಮತ್ತು ಒತ್ತಡವನ್ನು ಕಡಿಮೆಗೊಳಿಸುತ್ತದೆ. ಬಿಸಿ ಎಣ್ಣೆಯಿಂದ ನಿಮ್ಮ ನೆತ್ತಿಯನ್ನು ನಿಧಾನವಾಗಿ ಉಜ್ಜುವುದು ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಮಸಾಜ್ ತೆಂಗಿನ ಎಣ್ಣೆಯಿಂದ ಮಾಡಿಕೊಂಡರೆ ಉತ್ತಮವಾಗಿರುತ್ತದೆ. ಗುಲಾಬಿ ಎಣ್ಣೆಯಿಂದ ಮಸಾಜ್ ಮಾಡಿದಲ್ಲಿ ತಲೆಹೊಟ್ಟು ಕೂಡ ಕಡಿಮೆಯಾಗುತ್ತದೆ. ಎಣ್ಣೆಯಿಂದ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಅದನ್ನು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ. ನಂತರ ಮೃದುವಾದ ಬಟ್ಟೆಯಿಂದ ಒರಿಸಿಕೊಳ್ಳಿ. ವಾರದಲ್ಲಿ ಎರಡು ಬಾರಿ ಮಾಡಬೇಕು. ಇದು ಕೂದಲ ಆರೋಗ್ಯಕ್ಕೆ ಸಹಕಾರಿಯಾಗಿದೆ.

ಸರಿಯಾದ ಆಹಾರ ಪದ್ಧತಿ -Make Your Hair Grow FasterSimple tips for long hair in Kannada-itskannada

ನಿಮ್ಮ ಕೂದಲು ಉದುರುವುದನ್ನು ಕಡಿಮೆ ಮಾಡುವ ಉತ್ತಮ ಮಾರ್ಗ ಸರಿಯಾದ ಆಹಾರ ಪದ್ಧತಿ. ನೀವು ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಉದಾಹರಣೆಗೆ, ವಿಟಮಿನ್ ಸಿ, ವಿಟಮಿನ್ ಬಿ, ತಾಮ್ರ, ಸತು ಇತ್ಯಾದಿಗಳು. ಆಹಾರಗಳಲ್ಲಿನ ಪೋಷಕಾಂಶಗಳು ನಿಮ್ಮ ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತವೆ.ಹೆಚ್ಚಿನ ನಿರು ಸೇವನೆ ಕೂಡ ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ.. ಹೆಚ್ಚಿನ ನಿರು ಸೇವನೆ ನಮ್ಮ ದೇಹದ ಶಾಖವನ್ನು ದೂರ ಮಾಡುತ್ತದೆ.

ಉತ್ತಮ ಕಂಡಿಷನರ್ ಬಳಸಿ – Simple tips for long hair in Kannada

ಉತ್ತಮ ಕಂಡಿಷನರ್ ಅನ್ನು ಬಳಸುವುದು ಉತ್ತಮ. ಇದು ನಿಮ್ಮ ಕೂದಲನ್ನು ಬಲಪಡಿಸುತ್ತದೆ. ಇದನ್ನು ಶಾಂಪೂ ಜೊತೆಗೆ ಉಪಯೋಗಿಸುವುದು ಪರಿಣಾಮಕಾರಿ. ಇದು ಕೂದಲು ಮೃದುವಾಗಿ ಮತ್ತು ನಾಜೂಕಾಗಿರುವಂತೆ ಮಾಡುತ್ತದೆ.

ಮೊಟ್ಟೆ – ಉದ್ದನೆಯ ಕೂದಲಿಗೆ ಸರಳ ಸಲಹೆಗಳು

ನಿಮ್ಮ ಕೂದಲನ್ನು ಸುಧಾರಿಸಲು ನೀವು ಬಯಸಿದರೆ ಈ ಸಲಹೆ ಅನುಸರಿಸಿ. ಕೋಳಿ ಮೊಟ್ಟೆಯನ್ನು ಕೂದಲಿನ ಮೇಲೆ  (ಮುಖವಾಡದಂತೆ) ಮಾಸ್ಕ್ ಮಾಡಿ. 10 ನಿಮಿಷಗಳ ನಂತರ ಬಿಸಿನೀರಿನೊಂದಿಗೆ ಅದನ್ನು ಸ್ವಚ್ಛಗೊಳಿಸಿ. ಶಾಂಪೂ ಸ್ವಲ್ಪ ಕಡಿಮೆ ಉಪಯೋಗಿಸಿ.ವಾರದಲ್ಲಿ ಎರಡು ಬಾರಿ ಇದನ್ನು ಮಾಡಿದರೆ ಒಳ್ಳೆಯದು.

ಮೆಂತ್ಯ – Home Remedies For Hair Growth  in Kannada

ಇದು ಪ್ರತಿಯೊಂದು ಮನೆಗಳಲ್ಲಿ ಸರ್ವೇ ಸಾಮಾನ್ಯವಾಗಿ ಇರುವಂತಹದ್ದೆ. ಮೆಂತ್ಯ ತೆಗೆದುಕೊಂಡು ರಾತ್ರಿ ಮಲಗುವ ಮೊದಲು ನೀರಿನಲ್ಲಿ ಇರಿಸಿ. ಮರುದಿನ ಬೆಳಿಗ್ಗೆ ಅವುಗಳನ್ನು ಪುಡಿಮಾಡಿ ರುಬ್ಬಿ ತಲೆಯ ಮೇಲೆ ಲೇಪಿಸಿಕೊಳ್ಳಬೇಕು. ಒಂದು ಗಂಟೆ ನಂತರ ಅದನ್ನು ನೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಮಾಡಿದರೆ ಇದು ಉತ್ತಮ ಪರಿಣಾಮ ಬೀರುತ್ತದೆ.

ಪ್ರತಿದಿನ ಶಾಂಪೂ ಬಳಸಬೇಡಿ –ಉದ್ದನೆಯ ಕೂದಲಿಗೆ ಸರಳ ಸಲಹೆಗಳು

ಪ್ರತಿ ಬಾರಿ ನೀವು ಸ್ನಾನಕ್ಕೆ ಶಾಂಪೂ ಬಳಸಬೇಡಿ. “ನೀವು ಕೂದಲು ಕ್ಷಿಣಿಸಲು ಮಾಡುವ ಮುಖ್ಯ ಕೆಟ್ಟ ವಿಷಯವೆಂದರೆ ಪ್ರತಿ ದಿನ ಶಾಂಪೂ ಬಳಸುವುದು. ಸಾಧ್ಯವಾದಷ್ಟು ಅದರ ಬಳಕೆಯನ್ನು ಕಡಿಮೆ ಮಾಡಿ. ನಿಜವಾಗಿಯೂ ಶಾಂಪೂ ಬಳಸುವುದನ್ನು ಸಾಧ್ಯವಾದಷ್ಟು ಬಿಡಬೇಕು, ಅದರ ಬದಲಾಗಿ ಅವಶ್ಯಕವಾದ ನೈಸರ್ಗಿಕ ತೈಲಗಳನ್ನು ತೆಗೆದುಕೊಳ್ಳಬಹುದು. ನೀವು ನಿಜವಾಗಿಯೂ ಶಾಂಪೂ ಅಗತ್ಯವಿದ್ದಾಗ, ನಿಮ್ಮ ಕೂದಲನ್ನು ಮಾತ್ರ , ತಲೆಗೆ ತಾಗದಂತೆ ಬಳಸಬಹುದು. ನಿಮ್ಮ ಕೂದಲನ್ನು ಮೃದುವಾಗಿರಿಸಿಕೊಳ್ಳಿ ಸದಾ ಶಾಂಪೂ ಬಳಕೆ, ಕೂದಲು ಹೊಡೆಯುವಿಕೆಗೆ ಕಾರಣವಾಗುತ್ತದೆ.

ತಣ್ಣನೆ ನೀರನ್ನು ಬಳಸಿ-Simple tips for long hair in Kannada

ಪ್ರತಿ ಸ್ನಾನದ ಕೊನೆಯಲ್ಲಿ ಒಂದು ತಣ್ಣನೆ ನೀರನ್ನು ಬಳಸಿ ಕೂದಲನ್ನು ತೊಳೆಯಿರಿ , ತಣ್ಣೀರಿನ ಸ್ನಾನ ಇನ್ನೂ ಒಳ್ಳೆಯದು ಕೂದಲು ಹೆಚ್ಚು ಸರಾಗವಾಗಿ ಬೆಳೆಯಲು ತಣ್ಣನೆಯ ನೀರು ಸಹಕಾರಿಯಾಗಿದೆ. ಕೂದಲ ಮೇಲಿನ ಹಾನಿಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ – ನೀವು ಕೆಲ ದಿನಗಳು ತಣ್ಣೀರು ಬಳಸಿ ಕೂದಲನ್ನು ತೊಳೆಯುವುದು ಕಷ್ಟವಾಗಬಹುದು , ಆದರೆ ಕಾಲಾನಂತರದಲ್ಲಿ ಇದು ಹೆಚ್ಚುವರಿ  ಭಾರೀ ವ್ಯತ್ಯಾಸವನ್ನು ಉಂಟು ಮಾಡುತ್ತದೆ.  // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ . Kannada Home Remedies – Kannada Health Tips

WebTitle : ಉದ್ದನೆಯ ಕೂದಲಿಗೆ ಸರಳ ಸಲಹೆಗಳು –Simple tips for long hair in Kannada

itskannada : News | Entertainment | Information

For Karnataka Kannada News Visit Category Karnataka News or Page Kannada News  Online Today.If you like our News portal, then please consider following us on FacebookTwitterGoogle PlusYouTube 

To Promote Your Business Advertise with Us for more details Contact Us-Click To know more About Us-Check Out FilmPoliticsCrimeHealth TipsSportsRecipesTechnologyAstrologyJokesVideo News in Kannada

Leave A Reply

Your email address will not be published.

three × four =