ಮೊಬೈಲ್ ಬಿಸಿ ಆಗುವುದನ್ನು ತಪ್ಪಿಸಿ, ಇಲ್ಲದ್ದಿದ್ದರೆ ?

Avoid mobile heating problem | itskannada Technology

0 16

(itskannada): ಮೊಬೈಲ್ ಬಿಸಿ ಆಗುವುದನ್ನು ತಪ್ಪಿಸಿ , ಇಲ್ಲದಿದ್ದರೆ ನಿಮ್ಮ ಮೊಬೈಲ್ ಗೆ ಆಯಸ್ಸು ಕಡಿಮೆ ಅದಂತೆ , ನಮ್ಮ ಫೋನ್ ಹಾಳಾಗುವ ಮೊದಲು ನಾವು ಈ ಬಗ್ಗೆ ಎಚ್ಚರಿಕೆ ಕೈಗೊಳ್ಳಬೇಕು. “ಊರು ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ” ಎಂಬ ಗಾದೆ ಮಾತಿನಂತೆ ಹಾಳಾದಮೇಲೆ ಈ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ.

ಈ ದಿನ Android ಬಳಕೆದಾರರ ಸಾಮಾನ್ಯ ಪ್ರಶ್ನೆ , ನಮ್ ಫೋನ್ ಯಾಕೆ ಬಿಸಿ ಆಗುತ್ತೆ ಅನ್ನುವ ಪ್ರಶ್ನೆಗೆ ಪರಿಹಾರ ನೀಡುತ್ತೇವೆ.

ಅಲ್ಲದೇ ನಮ್ಮ ಮೊಬೈಲ್ ಬಿಸಿ ಆಗುವುದನ್ನು ತಪ್ಪಿಸಿ ಹೇಗೆ ಕಾಪಾಡಿಕೊಳ್ಳಬಹುದು ಎಂದು ನೋಡೋಣ.

ಈ ಹಿಂದಿನ ಲೇಖನದಲ್ಲಿ ಫೇಸ್ ಬುಕ್ ಅದ್ಭುತ ವಿಷಯಗಳು ಏನು ಮತ್ತು ಮೊಬೈಲ್ RAM ಅನ್ನು ಹೆಚ್ಚಿಸಿ ಎಂಬುದನ್ನು ತಿಳಿದಿದ್ದಾಯಿತಲ್ಲವೇ , ಈಗ ಮೊಬೈಲ್ ಬಿಸಿ ಆಗುವುದನ್ನು ತಪ್ಪಿಸಿ  (Avoid mobile heating problem) ಹೇಗೆ ಕಾಪಾಡುವುದೆಂದು ನೋಡೋಣ.

ಕೆಲವೊಮ್ಮೆ ನಮ್ಮ ಸ್ಮಾರ್ಟ್ ಫೋನ್ ಅಧಿಕವಾಗಿ ಬಿಸಿ ಆಗಿಬಿಡುತ್ತದೆ ಅಷ್ಟೇ ಅಲ್ಲದೆ ಕೆಲವೊಮ್ಮೆ ಅದು ಸ್ವಿಚ್ ಆಫ್ ಕೂಡ ಆಗಿ ಬಿಡುತ್ತದೆ.

ಇನ್ನು ಕೆಲವೊಮ್ಮೆ ಸಾದಾರಣವಾಗಿ ಬಳಸಲಾಗುವುದಿಲ್ಲ. ಈ ಸಮಸ್ಯೆ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಬಾರಿ ಎದುರಾಗಿರುತ್ತದೆ.

ನೀವು ಕೇಳಬಹುದು , ಬಿಸಿ ಆಗುವ ಈ ಸಮಸ್ಯೆ ಕೇವಲ ಮೊಬೈಲ್ ಗಳಲ್ಲಿ ಮಾತ್ರ ಏಕೆ ? ಏಕೆಂದರೆ ಕಂಪ್ಯೂಟರ್ , ಲ್ಯಾಪ್ಟಾಪ್ ಗಳಲ್ಲಿ ಕೂಲಿಂಗ್ ಫ್ಯಾನ್ ಅಳವಡಿಸಲಾಗಿರುತ್ತದೆ ಅದು ಬಿಸಿಯನ್ನು ತಣ್ಣಗಾಗಿಸುತ್ತದೆ . ಆದರೆ ನಮ್ಮ ಫೋನ್ ಗೆ ಆ ರೀತಿಯ ಸೌಲಭ್ಯವಿಲ್ಲ.

ಮೊಬೈಲ್ ಬಿಸಿ ಆಗುವುದು ಏಕೆ ? 

ಬಿಸಿ ಆಗುವುದು ಏಕೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

  1. ಮೊಬೈಲ್ ಬ್ರೈಟ್ ನೆಸ್  : ನಮ್ಮ ಮೊಬೈಲ್ ಬ್ರೈಟ್ ನೆಸ್ ನಾವು ಪೂರ್ತಿಯಾಗಿ ಇಟ್ಟಾಗ , ಫೋನಿನ ಬ್ಯಾಟರಿ ಕೂಡ ಬೇಗ ಕಡಿಮೆಯಾಗುತ್ತದೆ ಜೊತೆಗೆ ನಮ್ಮ ಮೊಬೈಲ್ ಬಿಸಿ ಆಗುತ್ತದೆ.
  2. ಸ್ವಯಂ ಚಾಲಿತ ಅಪ್ಲಿಕೇಶನ್ : ನಾವು ನಮ್ಮ ಫೋನಿನ ಬ್ಯಾಕ್ ಗ್ರೌಂಡ್ ರನ್ನಿಂಗ್ ಅಪ್ಲಿಕೇಶನ್ ಗಳನ್ನು ತೆಗೆಯದೆ ಇದ್ದಾಗ , ಫೋನಿನ ವೇಗ ಕಡಿಮೆಯಗುವುದಲ್ಲದೆ ನಮ್ಮ ಮೊಬೈಲ್ ಬಿಸಿ ಆಗಬಹುದು.
  3. ವೈ-ಪೈ ಮತ್ತು ಹಾಟ್ ಸ್ಪಾಟ್ : ನಾವು ಬಹಳ ಸಮಯ Wi-Fi ಮತ್ತು HotSpot ಬಳಸಿದರೆ ನಮ್ಮ ಮೊಬೈಲ್ ಬಿಸಿ ಬರುತ್ತದೆ.
  4. ಚಾರ್ಜ್ ಅಕಿದಾಗ : ಕೆಲವರು ಮೊಬೈಲ್ ಅನ್ನು ಚಾರ್ಜ್ ಗೆ ಆಕಿ ಬಳಸುತ್ತಾರೆ , ಅದರಿಂದ ಜೀವಕ್ಕೂ ಅಪಾಯ ಮತ್ತು ನಮ್ಮ ಫೋನ್ ಕೂಡ ಬಿಸಿ ಆಗುತ್ತದೆ.
  5. ನೆಟ್ವರ್ಕ್ ಇಲ್ಲದಿದ್ದಾಗ: ನಮ್ಮ ಫೋನಿನಲ್ಲಿ ನೆಟ್ ವರ್ಕ್ ಇಲ್ಲದಿದ್ದಾಗ , ನಮ್ಮ ಫೋನಿನ ಸಾದನಗಳು ನೆಟ್ ವರ್ಕ್ ಹುಡುಕಲು ಕಾರ್ಯವನ್ನು ಹೆಚ್ಚಿಸುತ್ತವೆ , ಆಗ MOBILE ಕಂಡಿತವಾಗಿಯು ಬಿಸಿ ಆಗುತ್ತದೆ.

ಮೊಬೈಲ್ ಬಿಸಿ ಆಗುವುದನ್ನು ತಪ್ಪಿಸಿ ಕಾಪಾಡಿಕೊಳ್ಳುವುದು ಹೇಗೆ ?

  1. ಮೊಬೈಲ್ ಬ್ರೈಟ್ ನೆಸ್  : ಮನೆಯ ಒಳಗಡೆ ಮತ್ತು ರಾತ್ರಿಯ ಸಮಯದಲ್ಲಿ ಬ್ರೈಟ್ ನೆಸ್ ಅಧಿಕವಾಗಿ ಹೆಚ್ಚಿಸುAvoid mobile heating problem-itskannadaವ ಅಗತ್ಯವಿರುವುದಿಲ್ಲ. ಆಗ ಬ್ರೈಟ್ ಕಡಿಮೆಗೊಳಿಸಿ, ಮೊಬೈಲ್ ಬಿಸಿ ಆಗುವುದು ತಪ್ಪುತ್ತದೆ.
  2. ಸ್ವಯಂಚಾಲಿತ ಅಪ್ಲಿಕೇಶನ್ : ಯಾವುದೇ ಅಪ್ಲಿಕೇಶನ್ ಬಳಸಿದ ಮೇಲೆ ಅದನ್ನು ಪೂರ್ಣವಾಗಿ ಕ್ಲೀನ್ ಮಾಡಿ, ಇಲ್ಲದಿದ್ದಲ್ಲಿ ಅದು ಸ್ವಯಂ ಚಾಲನೆಯಲ್ಲಿ ಇರುತ್ತದೆ. ತಪ್ಪಿಸಲು ಉಪಯೋಗಿಸಿದ ಯಾವುದೇ ಅಪ್ಲಿಕೇಶನ್ ತೆಗೆಯಿರಿ.
  3. ವೈ-ಪೈ ಮತ್ತು ಹಾಟ್ ಸ್ಪಾಟ್: ಒಂದೇ  ಸಮ ಗಂಟೆ ಗಟ್ಟಲೆ ಉಪಯೋಗಿಸದೇ ಇರಿ. ಬೇಕಾದ ಸಮಯದಲ್ಲಿ , ಅವಶ್ಯಕ ಇದ್ದಷ್ಟು ಮಾತ್ರ ಬಳಸಿ.
  4. ಚಾರ್ಜ್ ಅಕಿದಾಗ : ಇದು ಸಮಸ್ಯೆಯೇ ಆಲ್ಲ , ಏಕೆಂದರೆ ಇದರಿಂದ ಪ್ರಾಣಕ್ಕೆ ಅಪಾಯವಿರುವಾಗ , ನಮ್ಮ ಜೀವಿತಾವಧಿಯಲ್ಲಿ ಎಂದೂ ಈ ಸಮಯದಲ್ಲಿ ಮೊಬೈಲ್ ಅನ್ನು ಬಳಸುವುದನ್ನು ನಿಲ್ಲಿಸುವುದು ಒಳ್ಳೆಯದು. ಚಾರ್ಜ್ ತೆಗೆದು ಉಪಯೋಗಿಸಿ ಮತ್ತೆ ಚಾರ್ಜ್ ಗೆ ಹಾಕಿ.
  5. ನೆಟ್ವರ್ಕ್ ಇಲ್ಲದಿದ್ದಾಗ : ನೆಟ್ ವರ್ಕ್ ಇಲ್ಲದಿದ್ದಾಗ ಒಮ್ಮೆ ಏರೋಪ್ಲೇನ್ ಮೂಡ್ ಕ್ಲಿಕ್ಕಿಸಿ , ಒಮ್ಮೆ ಮೊಬೈಲ್ ಸ್ವಿಚ್ ಆಫ್ ಮಾಡಿ ಮತ್ತೆ ಆನ್ ಮಾಡಿ , ಅಲ್ಲಿಗೂ ನೆಟ್ವರ್ಕ್ ಬರಲಿಲ್ಲವಾದರೆ , ಸ್ವಲ್ಪ ಸಮಯ ಮೊಬೈಲ್ ಆಫ್ ಮಾಡುವುದು ಸೂಕ್ತ ಮಾರ್ಗ .

ಇವಿಷ್ಟು ಮೊಬೈಲ್ ಬಿಸಿ ಆಗುವುದನ್ನು ತಪ್ಪಿಸಿ ಕಾಪಾಡಿಕೊಳ್ಳುವ ಸುಲಭ ವಿಧಾನ. ಮೊಬೈಲ್ ಬಿಸಿಯಾಗುವ ಕಾರಣ ಹಾಗೂ ಅದಕ್ಕೆ ಪರಿಹಾರ ತಿಳಿದಾಯಿತಲ್ಲವಾ ,

ನಿಮಗಾಗಿ ನೀವು ಇಷ್ಟ ಪಡುವ ಹಲವು ಲೇಖನಗಳು ಇಟ್ಸ್ ಕನ್ನಡ ದಲ್ಲಿ ಲಭ್ಯ , ತಪ್ಪದೇ ಓದಿ. -| itskannada Technology


WebTitle : Avoid mobile heating problem

Keyword : ಮೊಬೈಲ್ ಬಿಸಿ ಆಗುವುದನ್ನು ತಪ್ಪಿಸಿ , Avoid mobile heating problem


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ತಂತ್ರಜ್ಞಾನ ಸುದ್ದಿಗಾಗಿ ತಂತ್ರ-ಜ್ಞಾನ  ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ತಂತ್ರಜ್ಞಾನ ಪುಟ –ಕನ್ನಡ ತಂತ್ರಜ್ಞಾನ-ಇಲ್ಲವೇ ವಿಭಾಗ ಕನ್ನಡ ಗ್ಯಾಜೆಟ್ಗಳ ಸುದ್ದಿ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada Technology  click Kannada Technology News or look at Kannada Gadgets News


itskannada : News | Entertainment | Information

For Karnataka Kannada News Visit Category Karnataka News or Page Kannada News
If you like our News portal, then please consider itskannada , following us on FacebookTwitterGoogle PlusYouTube .

To Promote Your Business Advertise with Us for more details Contact Us – Click To know more About Us – itskannada . Stay up to date with us in PoliticsFilmCrimeSportsHealth TipsRecipesAstrologyTechnologyJokes & more News in Kannada .