ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ ?

Why tying Lemon Chilli Coal to Doors - itskannada Astrology

0 94

(itskannada): ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ : ನಮ್ಮ ಹಿರಿಯರು ಪಾಲಿಸಿಕೊಂಡು ಬಂದ , ನಮಗೆ ಹೇಳಿಕೊಟ್ಟ ಹಲವು ವಿಷಯಗಳಿಗೆ ಅರ್ಥವಿದೆ. ಅವು ಇಂದಿಗೂ ಚಾಲನೆಯಲ್ಲಿವೆ ಆದರೇ ಅವುಗಳಲ್ಲಿ ನಾವು ಪಾಲಿಸುವ ಹಲವು ಆಚಾರಗಳು , ಏಕೆ ? ಎಂಬುದು ನಮಗೆ ಗೊತ್ತೇ ಇರುವುದಿಲ್ಲ.ಅಂತಹುಗಳ ಸಾಲಿನಲ್ಲಿ ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ  ಕೂಡ ವಿಶೇಷ .

ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ ಕ್ಕೆ ಎರಡು ರೀತಿಯ ವಿಚಾರಗಳಿವೆ.ಅದು ಪೌರಾಣಿಕ ಹಾಗೂ ವೈಜ್ಞಾನಿಕ .ಮೊದಲಿಗೆ ಪುರಾಣದ ಕಥೆ ಅಥವಾ ಕಾರಣವನ್ನು ನೋಡೋಣ.

ಈ ಹಿಂದಿನ ಸೂರ್ಯಾಸ್ತದ ನಂತರ ಇದನ್ನು ಎಂದಿಗೂ ಮಾಡಬೇಡಿ ಲೇಖನ  ತಪ್ಪದೇ ಓದಿ.

ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ – ಪುರಾಣ ಕಥೆ ಹಾಗೂ ನಂಬಿಕೆ

ನಮ್ಮ ಧಾರ್ಮಿಕತೆಯಲ್ಲಿ ಹುಟ್ಟಿರುವ ಕಥೆ : ಲಕ್ಷ್ಮಿಯನ್ನು ಪೂಜಿಸದೇ ಇರುವವರುಂಟೆ , ಬದವನಿಂದ ಕೊಟ್ಯಾದಿಪತಿಯ ತನಕ ಲಕ್ಷ್ಮಿಯನ್ನು ಆರಾಧಿಸುತ್ತಾರೆ , ಕಾರಣ ಅವಳು ನಮಗೆ ನಮ್ಮ ಕುಟುಂಬಕ್ಕೆ ಸಂವೃದ್ದಿಯನ್ನು ಕೊಡುತ್ತಾಳೆ. ಆದರೆ ಇವಳ ಸಹೋದರಿ ಇದೇ ಸಂವೃದ್ದಿಯನ್ನು ಕಿತ್ತುಕೊಳ್ಳುವ ಉಗ್ರ ದೇವತೆ ” ಅಲಕ್ಷ್ಮಿ ” ( ಉಗ್ರದೇವತೆ, ಕಾಳಿ , ದುರದೃಷ್ಟದ ದೇವತೆ , ಇನ್ನೂ ಹಲವು ಹೆಸರುಗಳಿಂದ ಕರೆಯಲಾಗುತ್ತದೆ).

ಈ ಅಲಕ್ಷ್ಮಿಯು ನಮ್ಮ ಮನೆಯಲ್ಲಿನ ಸಂವೃದ್ದಿಗೆ ದಕ್ಕೆತರುವವಳು , ಅವಳನ್ನು ಒಲಿಸಲು , ಮಾಡುವುದೇ ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ .

ಅಲಕ್ಷ್ಮಿಗೆ ಬಿಸಿ, ಹುಳಿ , ಖಾರ ಎಂದರೆ ಬಹಳ ಇಷ್ಟ , ಇಂತಹವುಗಳಿಗೆ ಅವಳು ಬೇಗನೆ ಒಲಿಯಿತ್ತಾಳೆ.

ಇದೇ ಕಾರಣಕ್ಕೆ , ಜನರು ನಿಂಬೆಹಣ್ಣು ( ಹುಳಿ) , ಮೆಣಸಿನಕಾಯಿ ( ಖಾರ ) , ಇಜ್ಜಲು ( ಬಿಸಿ ) ಯನ್ನು ಬಾಗಿಲಿಗೆ , ತಾವು ವ್ಯಾಪಾರ ಮಾಡುವ ಸ್ಥಳಗಳಲ್ಲಿ ಕಟ್ಟುತ್ತಾರೆ.

ಅವಳ ವಕ್ರದೃಷ್ಟಿ ಬೀಳಬಾರದು ಎಂದು ಬೇಡುತ್ತಾರೆ. ಇದು ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ ದ ಪುರಾಣ.

ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ – ಹಿರಿಯರ ಪಾಲನೆ

ಇನ್ನು ಇದೆ ವಿಚಾರವನ್ನು ನಮ್ಮ ಹಿರಿಯರು ಏಕೆ ಪಾಲಿಸುತ್ತಿದ್ದರು ಎಂದು ನೋಡುವುದಾದರೆ ,  ಆಗಿನ ಕಾಲದಲ್ಲಿ  ಈ ನಿಂಬೆ ಮೆಣಸಿನಕಾಯಿ ಇಜ್ಜಲನ್ನು ಎತ್ತಿನಗಾಡಿಗೆ ಕಟ್ಟುತ್ತಿದ್ದರು , ಕಾರಣವನ್ನು ವಿಶ್ಲೇಷಿಸಿದರೆ , ನಮ್ಮ ಹಿರಿಯರು ಅದೇ ಎತ್ತಿನಗಾಡಿಯನ್ನು ತಮ್ಮ  ವಾಹನವನ್ನಾಗಿ   ಉಪಯೋಗಿಸುತ್ತಿದ್ದುದು  ನಮಗೆಲ್ಲಾ ಗೊತ್ತೆಯಿದೆ. ಕಾಡು-ಮೇಡೆನ್ನದೆ ಎತ್ತಿನಗಾಡಿಯಲ್ಲಿಯೇ ಸಂಚರಿಸುತ್ತಿದ್ದರು , ದಾರಿಮದ್ಯ ಯಾವುದಾದರು ವಿಷಕಾರಿ ಜಂತುಗಳು , ಹಾವು, ಚೇಳುಗಳು ಕಚ್ಚಿದರೆ , ಇದೇ ನಿಂಬೆ ಮೆಣಸಿನಕಾಯಿ ಇಜ್ಜಲನ್ನು ಮದ್ದಾಗಿ ಬ

Why tying Lemon Chilli Coal to Doors-itskannada 1

ಳಸುತ್ತಿದ್ದರು. ಅಕಸ್ಮಾತಾಗಿ ಯಾವುದಾದರು ವಿಷಕಾರಿ ಕಚ್ಚಿದಾಗ , ಈ   ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ನಾಲಗೆಯ  ಮೇಲೆ ಸವರಿಕೊಂಡು ನಾಲಗೆಗೆ ಖಾರದ ಅನುಭವವಾದರೆ ಕಚ್ಚಿರುವುದು ವಿಷಕಾರಿಯಲ್ಲ, ಖಾರದ  ಅನುಭವ ಆಗದೆ ಇದ್ದಾರೆ , ಕಚ್ಚಿರುವುದು ವಿಷಕಾರಿ

ಎಂದು ಗುರುತಿಸುತ್ತಿದ್ದರು.

ಪುರಾಣದ ಕಥೆ ಹಾಗು ನಮ್ಮ ಹಿರಿಯರ ಬಳಕೆಯ ಬಗೆಗೆ ತಿಳಿದಿದ್ದಾಯಿತು, ಇನ್ನು ಇದೇ ವಿಚಾರವಾಗಿ ವೈಜ್ಞಾನಿಕ ,ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ ನೋಡೋಣ.

ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ – ವೈಜ್ಞಾನಿಕ 

ಈ ನಂಬಿಕೆಯ ಹಿಂದಿರುವ ವಿಜ್ಞಾನ ಬಹುಶಃ ಸಂಸ್ಕೃತಿಯಿಂದ ಉಂಟಾಗಿದೆ, ನಿಂಬೆ ಮತ್ತು ಮೆಣಸಿನಕಾಯಿ ಗುಣಗಳು ಅವುಗಳ ಬಳಕೆಯನ್ನು ಪ್ರೋತ್ಸಾಹಿಸುತ್ತವೆ. ಈ ಎರಡರಲ್ಲೂ ಸಹ “ಸಿ” ವಿಟಮಿನ್ ಸಮೃದ್ಧವಾಗಿದೆ,

ಆದ್ದರಿಂದ ನಿಂಬೆ ಮತ್ತು ಮೆಣಸಿನಕಾಯಿಯೊಂದಿಗೆ ಸೂಜಿಯನ್ನು ಚುಚ್ಚಿದಾಗ, ಇದರ ವಿಟಮಿನ್ ಗಳು ಕ್ರಮೇಣ ಗಾಳಿಯಲ್ಲಿ ಆವಿಯಾಗುತ್ತದೆ. ಈ ಗಾಳಿಯನ್ನು ನಾವು ಉಸಿರಾಡುತ್ತೇವೆ .

ನಮ್ಮ ಆರೋಗ್ಯ ಪ್ರಯೋಜನಕ್ಕಾಗಿ ಅವುಗಳ ಗುಣಗಳನ್ನು ಬಳಸುತ್ತೇವೆ.

ನಮ್ಮ ದೈನಂದಿನ ಜೀವನದಲ್ಲಿ  ಬಳಸಲಾಗುವ ಕೆಲವು ವಿಚಾರಗಳನ್ನು, ನಿಧಾನವಾಗಿ ಮೂಢನಂಬಿಕೆಯಾಗಿ ಬದಲಾಯಿಸಿಕೊಳ್ಳುತ್ತೇವೆ. ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ ಗಳು ಇವಿಷ್ಟು.

ಇಂತಹ ಹಲವಾರು ವಿಷಯ ಮತ್ತು ವಿಚಾರದ ಮಾಹಿತಿಗಳನ್ನು “ಇಟ್ಸ್ ಕನ್ನಡ” ದಲ್ಲಿ ಇಂತಹ ಹಲವಾರು ವಿಷಯ ಮತ್ತು ವಿಚಾರದ ಮಾಹಿತಿಗಳನ್ನು “ಇಟ್ಸ್ ಕನ್ನಡ” ದಲ್ಲಿ ಓದಲು ಮರೆಯದಿರಿ.

ತಮಾಷೆಯೆಂದರೆ ಕೇವಲ ಮನೆ , ಅಂಗಡಿ ಅಲ್ಲದೆ – BMW , AUDI ಕಾರುಗಳವರೆಗೂ ಇದು ಪಾಲಿಸಲಾಗುತ್ತಿದೆ. _ itskannada Astrology


webtitle : Why tying Lemon Chilli Coal to Doors

keyword : ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ , Why tying Lemon Chilli Coal to Doors .


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಜೋತಿಷ್ಯಕ್ಕಾಗಿ ರಾಶಿ-ನಕ್ಷತ್ರ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಜೋತಿಷ್ಯ ಪುಟ –ಕನ್ನಡ ಜ್ಯೋತಿಷ್ಯ-ಇಲ್ಲವೇ ವಿಭಾಗ ಕನ್ನಡ ದೈನಂದಿನ ಜಾತಕ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada Jyothishya click Kannada Jyothishya or look at Kannada Daily Horoscope

itskannada : News | Entertainment | Information

For Karnataka Kannada News Visit Category Karnataka News or Page Kannada News  Online Today.If you like our News portal, then please consider following us on FacebookTwitterGoogle PlusYouTube 

To Promote Your Business Advertise with Us for more details Contact Us-Click To know more About Us-Check Out FilmPoliticsCrimeHealth TipsSportsRecipesTechnologyAstrologyJokesVideo News in Kannada

Leave A Reply

Your email address will not be published.

13 − eleven =