ಸೂರ್ಯಾಸ್ತದ ನಂತರ ಇದನ್ನು ಎಂದಿಗೂ ಮಾಡಬೇಡಿ !

Dont do These After Susnset | itskannada Astrology

0 32

(itskannada): ಸೂರ್ಯಾಸ್ತದ ನಂತರ ಇದನ್ನು ಎಂದಿಗೂ ಮಾಡಬೇಡಿ !(Dont do These After Susnset)  – ಇವುಗಳನ್ನು ನೀವು ಅನುಸರಿಸುತ್ತಿರೋ ಇಲ್ಲವೋ ಆದರೆ ಹಿಂದೂ ಸಂಸ್ಕೃತಿ , ಜೋತಿಷ್ಯ ಶಾಸ್ತ್ರ ಮತ್ತು ವೈಜ್ಞಾನಿಕವಾಗಿ ಹತ್ತಿರವಾಗಿರುವ ಕೆಲವು ವಿಷಯಗಳನ್ನು ಸೂರ್ಯಾಸ್ತದ ನಂತರ ಮಾಡದೇ ಇರುವುದು ಒಳಿತು.

ಹಿಂದೂ ಸಂಸ್ಕೃತಿ ಹಾಗೂ ಜೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಕೆಲವು ವಿಷಯಗಳನ್ನು ಹಾಗೂ ನಂಬಿಕೆಗಳನ್ನು ನಿಮ್ಮ ಮುಂದೆ ಇಡಲಿದ್ದೀವೆ.  ಸೂರ್ಯಾಸ್ತದ ನಂತರ ದ ಕೆಲವು ಆಚರಣೆಗಳು ನಂಬಿಕೆಗಳು ಇಲ್ಲಿವೆ.

ಈ ಹಿಂದಿನ  “ಪುರುಷರನ್ನು ಆಕರ್ಷಿಸುವ ರಾಶಿಚಕ್ರಗಳು” ಲೇಖನ ಓದಿಲ್ಲವಾದರೆ ತಪ್ಪದೇ ಓದಿ .

ಸೂರ್ಯಾಸ್ತದ ಸಮಯದಲ್ಲಿ ಊಟಮಾಡಬಾರದು .

ಗಾಬರಿ ಆಗಬೇಡಿ , ಏನಪ್ಪಾ , ಇದು ಸೂರ್ಯಾಸ್ತದ ನಂತರ ಊಟ ಮಾಡಬಾರದು ಅಂದರೆ ರಾತ್ರಿ ಉಪವಾಸ ಇರಬೇಕಾ ? ಇಲ್ಲ , ಇದನ್ನು ನಾವು ವೈಜ್ಞಾನಿಕವಾಗಿ ನೋಡಿದರೆ ,

ವೈದ್ಯರು ಸಲಹೆ ನಿಡುವುದಿಲ್ಲವೇ , ನಿದ್ರಿಸುವ 3-4 ಗಂಟೆಗಳ ಮುಂಚಿತ ಊಟ ಮಾಡಬೇಕೆಂದು. ಇಲ್ಲಿ ಗಮನಿಸ ಬೇಕಾದುದು ಅರೋಗ್ಯ ಹಾಗೂ ಊಟದ ಸಮಯ ನಿರ್ದಿಷ್ಟವಾಗಿರಬೇಕೆಂದು. ಇದು ಪದ್ದತಿಯಾಗಿ ರೂಡಿಯಾಗಿದೆ.

ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು.

ಮೇಲಿನ ವಿಷಯವನ್ನು ನೋಡಿದಾಗ , ಏಕೆ ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು ಎಂದು ಶಾಸ್ತ್ರವು ಹೇಳುತ್ತದೆ ಎಂದು ಅರ್ಥ್ವಗಿರಬೇಕಲ್ಲವೇ , ಆಗಲಿಲ್ ಎಂದರೆ ಹೇಳ್ತಿವಿ ಕೇಳಿ.  ಮೊದಲು ಹೇಳಿದಂತೆ ಸೂರ್ಯಾಸ್ತದ ಸಮಯದಲ್ಲಿ ಊಟ ಮಾಡಬಾರದು    ಎಂದರೆ ಹಿಂದೆ ನಮ್ಮ ಹಿರಿಯರು ಸೂರ್ಯಾಸ್ತದ ಮೊದಲೇ ಊಟ ಮಾಡುತ್ತಿದ್ದರು , ಊಟ   ಮಾಡಿದ ತಕ್ಷಣ  ಮಲಗುವುದು ಶ್ರೇಯಸ್ಸಲ್ಲ ಎನ್ನುವ ನಂಭಿಕೆ ಇಟ್ಟಿದ್ದರು , ಇನ್ನು ಇದನ್ನೇ ವೈಜ್ಞಾನಿಕವಾಗಿ ನೋಡಿದರೆ ಊಟ ಮಾಡಿದ ತಕ್ಷಣ ಮಲಗಿದರೆ ತಿಂದದ್ದು ಜೀರ್ಣವಾಗುವುದಿಲ್ಲ. ಅಜೀರ್ಣ ಸಮಸ್ಯೆ ಎದುರಿಸಬೇಕಾಗುತ್ತದೆ.

ಆಯುರ್ವೇದದ ತತ್ವಗಳ ಪ್ರಕಾರ, ಮಾನವ ದೇಹವು ಪ್ರಕೃತಿಯಚಕ್ರ ,ಸೂರ್ಯನ ಬೆಳಕನ್ನು ಗ್ರಹಿಸುವ ಶಕ್ತಿಯನ್ನು ಬಹಳಷ್ಟು ಹೊಂದಿದೆ. ಇದು ಸೂರ್ಯಾಸ್ತದ ನಂತರ ಒಂದು ಗಂಟೆ ಪ್ರಾರಂಭದ ಅವಧಿಯನ್ನು ಗುರುತಿಸುತ್ತದೆ.

ಸೂರ್ಯಾಸ್ತದ ನಂತರ ಉಗುರನ್ನು ಕತ್ತರಿಸಬೇಡಿ .

ನಮ್ಮ ಹಿರಿಯರು ಹೇಳಿಕೊಟ್ಟ ಪಾಠದಂತೆ ಸುರ್ಯಾಸ್ತದಲ್ಲಿ ಉಗುರನ್ನು ಕತ್ತರಿಸುವುದು ಅಪರಾಧ  ಎಂದು ನಾವು ನಬಿದ್ದೇವೆ , ಇದನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದೇವೆ , ಈ ವಿಚಾರಕ್ಕೆ ತಕ್ಕಂತೆ ವೈಜ್ಞಾನಿಕ ಕಾರಣವು ಇದೇ , ಹಿಂದಿನ Dont do These After Susnset-itskannadaಕಾಲದಲ್ಲಿ ವಿದ್ದ್ಯುತ್ ನ   ಸೌಲಭ್ಯ ಇರಲಿಲ್ಲ , ಯಾವುದೇ ಕೆಲಸ ಕಾರ್ಯಗಳನ್ನು ಅವರು   ಸೂರ್ಯಾಸ್ತದ ಮುಂಚಿತವಾಗಿಯೇ ಮಾಡುತ್ತಿದ್ದರು. ಕಾರಣ ಆ ನಂತರ ಕತ್ತಲೆಯಲ್ಲಿ ಆ ಕಾರ್ಯ ಮಾಡಲಾಗುವುದಿಲ್ಲ ಎಂದು.   ಈ ವಿಚಾರವು ಅದಕ್ಕೆ ಸಂಬಂದ ಪಟ್ಟಿರುವುದೇ ಆಗಿದೆ, ಸುರ್ಯಾಸ್ತದ ನಂತರ ಕತ್ತಲೆ ಆವರಿಸುತ್ತದೆ ಉಗುರನ್ನು ಕತ್ತರಿಸಲು ಹೋಗಿ ಗಾಯವಾದೀತು ಎಂಬುದೇ ಇದರ ಮುಖ್ಯ ಕಾರಣ.

ಸುರ್ಯಾಸ್ತದ ನಂತರ ಕಸಗುಡಿಸ ಬೇಡಿ.

ಮೇಲಿನ ವಿಚಾರಗಳನ್ನು ತಿಳಿದ ಮೇಲೆ , ಇದಕ್ಕೆ ಕಾರಣ ಸುಲಭವಾಗಿ ತಿಳಿಯಬಹುದು , ಹೌದು ನಿಮ್ಮ ಊಹೆ ನಿಜ , ನಮ್ಮ ಹಿರಿಕರು ಸೂರ್ಯಾಸ್ತದ ನಂತರ ಕಸ ಗುಡಿಸುತ್ತಿರಲಿಲ್ಲ , ಕಾರಣ ಕತ್ತಲು ! ಕಾಣದ ಕಾರಣ. ಅದನ್ನೇ ನಾವು ಸಹ ಅನುಸರಿಸುತ್ತಾ ಬಂದೆವು. ಇದರ ವೈಜ್ಞಾನಿಕ ವಿಚಾರ ನೋಡಿದರೆ , ಮಲಗುವ ಮುನ್ನ ನಾವು ಗಸಗುಡಿಸಿದ್ದೇ ಆದರೆ ಆ ದೂಳು ಮನೆಯಲ್ಲಿಯೇ ಇರುತ್ತದೆ , ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಲಗಿದಾಗ ನಾವು ಹೆಚ್ಚು ಉಸಿರಾಡುತ್ತೇವೆ , ಈ ದೂಳು ಪರಿಣಾಮಬೀರುತ್ತದೆ.

ಇವಿಷ್ಟು ಸೂರ್ಯಾಸ್ತದ ನಂತರ ಮಾಡಬಾರದು (Dont do These After Susnset) ಎಂಬ ಜೋತಿಷ್ಯ ಶಾಸ್ತ್ರ ಹಾಗೂ ವೈಜ್ಞಾನಿಕ ವಿಷಯಗಳು-| itskannada Astrology


WebTitle : Dont do These After Susnset

Keyword : ಸೂರ್ಯಾಸ್ತದ ನಂತರ ,  .


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಜೋತಿಷ್ಯಕ್ಕಾಗಿ ರಾಶಿ-ನಕ್ಷತ್ರ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಜೋತಿಷ್ಯ ಪುಟ –ಕನ್ನಡ ಜ್ಯೋತಿಷ್ಯ-ಇಲ್ಲವೇ ವಿಭಾಗ ಕನ್ನಡ ದೈನಂದಿನ ಜಾತಕ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada Jyothishya click Kannada Jyothishya or look at Kannada Daily Horoscope

itskannada : News | Entertainment | Information

For Karnataka Kannada News Visit Category Karnataka News or Page Kannada News  Online Today.If you like our News portal, then please consider following us on FacebookTwitterGoogle PlusYouTube 

To Promote Your Business Advertise with Us for more details Contact Us-Click To know more About Us-Check Out FilmPoliticsCrimeHealth TipsSportsRecipesTechnologyAstrologyJokesVideo News in Kannada

Leave A Reply

Your email address will not be published.

20 − four =