Kannada news-Latest news in Kannada-Kannada live news-Kannada Breaking News-Online Kananda News

ಮದುವೆಗೆ ಆಮಂತ್ರಿಸಲು ಬಂದವ ಚಾಕು ಇರಿದ

0 103

ಹಾಸನ- (itskannada) ಮದುವೆಗೆ ಆಮಂತ್ರಿಸಲು ಬಂದವ ಚಾಕು ಇರಿದ- ಮದುವೆಗೆ ಆಮಂತ್ರಿಸುವ ನೆಪದಲ್ಲಿ ಮನೆಗೆ ಬಂದವರು  ದಂಪತಿಗೆ ಚಾಕು ಇರಿದು 3 ಲಕ್ಷ ರೂ. ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ಹಾಸನದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.

ಮದುವೆಗೆ ಆಮಂತ್ರಿಸಲು ಬಂದವ ಚಾಕು ಇರಿದ

ವಾಗೀಶ್(61), ಸಾವಿತ್ರಿ(55 ಇರಿತಕ್ಕೊಳಗಾದ ದಂಪತಿ. ವಾಗೀಶ್ ರ ಬಳಿ ಇಮ್ರಾನ್ ಎಂಬಾತ ಕೆಲಸ ಮಾಡುತ್ತಿದ್ದನು. ಈ ಪರಿಚಯದಿಂದ ಇಂದು ಇಮ್ರಾನ್ ತನ್ನ ಅಣ್ಣನ ಮದುವೆ ಆಮಂತ್ರಣ ನೆಪ ಹೊಡ್ಡಿ ವಾಗೀಶ್ ಮನೆಗೆ ಬಂದಿದ್ದಾನೆ. ಪರಿಚಯದಿಂದ ಮನೆ ಹೊಳ ಬರಿಸಿಕೊಂಡದ್ದಕ್ಕೆ ಅಲ್ಲಿ ನಡೆದದ್ದೇ ಬೇರೆ.

ಇಮ್ರಾನ್ ಮನೆಯಲ್ಲಿದ್ದ ದಂಪತಿಗೆ ಚಾಕು ಇರಿದು ಸುಮಾರು 3 ಲಕ್ಷ ರೂ. ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ವೇಳೆ ಹಲ್ಲೆಗೊಳಗಾದ ದಂಪತಿಯನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಕುವೆಂಪು ನಗರ ಬಡಾವಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಇಮ್ರಾನ್ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.  (its kannada)


ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಹಾಸನ ಸುದ್ದಿ ಗಾಗಿ ಹಾಸನ ಸುದ್ದಿ – ಪುಟ ಕ್ಲಿಕ್ಕಿಸಿ ಅಥವಾ ವಿಭಾಗ ಹಾಸನ ನ್ಯೂಸ್ ಕ್ಲಿಕ್ಕಿಸಿ itskannada :Today News in Kannada, for latest news visit-Kannada news– more in Hassan Click Hassan News Online – or look at Hassan News Today

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.